Sign in
Sign in
Sign in
Select Language
042

Ash-Shuraa 42:10 وما اختلفتم فيه من شيء فحكمه الى الله ذالكم الله ربي عليه توكلت واليه انيب ١٠

42:10
وَمَا
ٱخۡتَلَفۡتُمۡ
فِيهِ
مِن
شَيۡءٖ
فَحُكۡمُهُۥٓ
إِلَى
ٱللَّهِۚ
ذَٰلِكُمُ
ٱللَّهُ
رَبِّي
عَلَيۡهِ
تَوَكَّلۡتُ
وَإِلَيۡهِ
أُنِيبُ
١٠
ನೀವು ಯಾವುದೇ ವಿಷಯದಲ್ಲಿ ಭಿನ್ನಮತ ತಳೆದಿದ್ದರೂ ಆ ವಿಷಯದಲ್ಲಿ ತೀರ್ಪು ನೀಡುವ ಅಧಿಕಾರವಿರುವುದು ಅಲ್ಲಾಹನಿಗೆ ಮಾತ್ರ. (ಹೇಳಿರಿ): “ಅವನೇ ನನ್ನ ಪರಿಪಾಲಕನಾದ ಅಲ್ಲಾಹು. ನಾನು ಅವನಲ್ಲಿಯೇ ಭರವಸೆಯಿಟ್ಟಿದ್ದೇನೆ ಮತ್ತು ಅವನ ಬಳಿಗೆ ವಿನಮ್ರತೆಯಿಂದ ಮರಳುತ್ತೇನೆ.”
Continue Reading

Read Tafsir

Ibn Kathir (Abridged)

Allah is the Protector, Ruler and Creator

Here Allah denounces the idolators for taking other gods instead of Allah, and declares that He is the True God, and it is not right to worship anyone except Him Alone. He is the One Who is able to bring the dead back to life and He is Able to do all things.

…

Allah is the Protector, Ruler and Creator

Here Allah denounces the idolators for taking other gods instead of Allah, and declares that He is the True G

…
More Tafsirs

Read in Context

Chapter 42, Page 483, Juz 25

10. ನೀವು ಯಾವುದೇ ವಿಷಯದಲ್ಲಿ ಭಿನ್ನಮತ ತಳೆದಿದ್ದರೂ ಆ ವಿಷಯದಲ್ಲಿ ತೀರ್ಪು ನೀಡುವ ಅಧಿಕಾರವಿರುವುದು ಅಲ್ಲಾಹನಿಗೆ ಮಾತ್ರ. (ಹೇಳಿರಿ): “ಅವನೇ ನನ್ನ ಪರಿಪಾಲಕನಾದ ಅಲ್ಲಾಹು. ನಾನು ಅವನಲ್ಲಿಯೇ ಭರವಸೆಯಿಟ್ಟಿದ್ದೇನೆ ಮತ್ತು ಅವನ ಬಳಿಗೆ ವಿನಮ್ರತೆಯಿಂದ ಮರಳುತ್ತೇನೆ.” 11. ಅವನು ಭೂಮ್ಯಾಕಾಶಗಳ ಸೃಷ್ಟಿಕರ್ತನು. ಅವನು ನಿಮ್ಮಿಂದಲೇ ನಿಮಗೆ ಜೋಡಿಗಳನ್ನು ಮಾಡಿದನು. ಅವನು ಜಾನುವಾರುಗಳಿಂದಲೂ ಜೋಡಿಗಳನ್ನು ಮಾಡಿದನು. ಅದರ ಮೂಲಕ ಅವನು ನಿಮ್ಮನ್ನು ಹಬ್ಬಿಸುತ್ತಾನೆ. ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ. 12. ಭೂಮ್ಯಾಕಾಶಗಳ ಕೀಲಿಗಳು ಅವನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಅವನು ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಅದನ್ನು ಇಕ್ಕಟ್ಟುಗೊಳಿಸುತ್ತಾನೆ. ನಿಶ್ಚಯವಾಗಿಯೂ ಅವನು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ. 13. ಅಲ್ಲಾಹು ನೂಹರಿಗೆ ಸಂಸ್ಥಾಪಿಸಬೇಕೆಂದು ಆದೇಶಿಸಿದ, ನಿಮಗೆ ದೇವವಾಣಿಯ ಮೂಲಕ ಕಳುಹಿಸಿದ ಮತ್ತು ಇಬ್ರಾಹೀಮ್, ಮೂಸಾ, ಈಸಾ ಮುಂತಾದವರಿಗೆ ಆದೇಶಿಸಿದ ಅದೇ ಧರ್ಮವನ್ನು ನಾವು ನಿಮಗೆ ನಿಶ್ಚಯಿಸಿದ್ದೇವೆ. ಅಂದರೆ ನೀವು ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಅದರಲ್ಲಿ ಭಿನ್ನರಾಗಬೇಡಿ. ನೀವು ಆ ಬಹುದೇವವಿಶ್ವಾಸಿಗಳನ್ನು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಅವರಿಗೆ ಸಂಬಂಧಿಸಿದಂತೆ ಭಾರವಾಗಿದೆ. ಅಲ್ಲಾಹು ಅವನು ಇಚ್ಛಿಸುವವರನ್ನು ಅವನು ಆರಿಸಿಕೊಂಡವರಲ್ಲಿ ಸೇರಿಸುತ್ತಾನೆ ಮತ್ತು ಅವನ ಕಡೆಗೆ ತಿರುಗುವವರನ್ನು ಸರಿಯಾದ ಮಾರ್ಗದಲ್ಲಿ ಸೇರಿಸುತ್ತಾನೆ. 14. ಅವರ ಬಳಿಗೆ ಜ್ಞಾನವು ಬಂದ ಬಳಿಕವೇ ಅವರು ಭಿನ್ನರಾದರು. (ಅದೂ ಕೂಡ) ಅವರು ಪರಸ್ಪರ ಹೊಂದಿದ್ದ ವಿರೋಧದಿಂದಾಗಿ. ಒಂದು ನಿಶ್ಚಿತ ಅವಧಿಯವರೆಗೆ ಮುಂದೂಡುತ್ತೇನೆ ಎಂಬ ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಮೊದಲೇ ಇಲ್ಲದಿರುತ್ತಿದ್ದರೆ ಅವರ ನಡುವೆ (ತಕ್ಷಣ) ತೀರ್ಪು ನೀಡಲಾಗುತ್ತಿತ್ತು. ಅವರ ನಂತರ ಗ್ರಂಥದ ವಾರಸುದಾರರಾದವರು ಯಾರೋ ನಿಶ್ಚಯವಾಗಿಯೂ ಅವರು ಅದರ ಬಗ್ಗೆ ಗೊಂದಲಪೂರ್ಣ ಸಂಶಯದಲ್ಲಿದ್ದಾರೆ. 15. ನೀವು ಇದೇ ರೀತಿ ಜನರನ್ನು ಕರೆಯುತ್ತಿರಿ. ನಿಮಗೆ ಏನು ಆಜ್ಞಾಪಿಸಲಾಗಿದೆಯೋ ಅದರಲ್ಲಿ ದೃಢವಾಗಿ ನಿಲ್ಲಿರಿ. ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಹೇಳಿರಿ: “ಅಲ್ಲಾಹು ಅವತೀರ್ಣಗೊಳಿಸಿದ ಎಲ್ಲಾ ಗ್ರಂಥಗಳಲ್ಲೂ ನಾನು ವಿಶ್ವಾಸವಿಟ್ಟಿದ್ದೇನೆ. ನಿಮ್ಮ ನಡುವೆ ನ್ಯಾಯದಿಂದ ವರ್ತಿಸಲು ನನಗೆ ಆಜ್ಞಾಪಿಸಲಾಗಿದೆ. ಅಲ್ಲಾಹನೇ ನಮ್ಮ ಮತ್ತು ನಿಮ್ಮ ಪರಿಪಾಲಕ. ನಮಗೆ ನಮ್ಮ ಕರ್ಮಗಳು ಮತ್ತು ನಿಮಗೆ ನಿಮ್ಮ ಕರ್ಮಗಳು. ನಮ್ಮ ಮತ್ತು ನಿಮ್ಮ ಮಧ್ಯೆ ಯಾವುದೇ ತರ್ಕವಿಲ್ಲ. ಅಲ್ಲಾಹು ನಮ್ಮನ್ನು ಪರಸ್ಪರ ಒಟ್ಟುಗೂಡಿಸುವನು. ಗಮ್ಯಸ್ಥಾನವು ಅವನ ಬಳಿಗೇ ಆಗಿದೆ.” 16. ಜನರು ಅಲ್ಲಾಹನ ಮಾತನ್ನು ಅಂಗೀಕರಿಸಿದ ಬಳಿಕ ಅಲ್ಲಾಹನ ವಿಷಯದಲ್ಲಿ ತರ್ಕಿಸುವವರು ಯಾರೋ ಅವರ ತರ್ಕವು ಅಲ್ಲಾಹನ ದೃಷ್ಟಿಯಲ್ಲಿ ನಿರರ್ಥಕವಾಗಿದೆ. ಅವರ ಮೇಲೆ ಕೋಪವಿದೆ ಮತ್ತು ಅವರಿಗೆ ಕಠೋರ ಶಿಕ್ಷೆಯಿದೆ. 17. ಅಲ್ಲಾಹು ಸತ್ಯದೊಂದಿಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ ಮತ್ತು ತಕ್ಕಡಿಯನ್ನು (ಕೂಡ ಇಳಿಸಿಕೊಟ್ಟಿದ್ದಾನೆ). ನಿಮಗೇನು ಗೊತ್ತು? ಅಂತ್ಯಸಮಯವು ಸಮೀಪದಲ್ಲೇ ಇರಬಹುದು. 18. ಅದರಲ್ಲಿ ವಿಶ್ವಾಸವಿಡದವರು ಅದಕ್ಕಾಗಿ (ಅಂತ್ಯಸಮಯಕ್ಕಾಗಿ) ಆತುರಪಡುತ್ತಾರೆ. ಆದರೆ ಸತ್ಯವಿಶ್ವಾಸಿಗಳು ಅದರ ಬಗ್ಗೆ ಭಯಭೀತರಾಗಿದ್ದಾರೆ. ಅವರು ಅದು ಸತ್ಯವೆಂದು ತಿಳಿದಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅಂತ್ಯಸಮಯದ ವಿಷಯದಲ್ಲಿ ತರ್ಕಿಸುವವರು ಯಾರೋ ಅವರು ವಿದೂರ ದುರ್ಮಾರ್ಗದಲ್ಲಿದ್ದಾರೆ. 19. ಅಲ್ಲಾಹು ಅವನ ದಾಸರ ಮೇಲೆ ದಯೆಯನ್ನು ಹೊಂದಿದ್ದಾನೆ. ಅವನು ಇಚ್ಛಿಸುವವರಿಗೆ ಅವನು ಉಪಜೀವನವನ್ನು ಒದಗಿಸುತ್ತಾನೆ. ಅವನು ಮಹಾ ಶಕ್ತಿಶಾಲಿ ಮತ್ತು ಪ್ರಬಲನಾಗಿದ್ದಾನೆ.

- Kannada Translation - Hamza Butur

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute