Sign in
Sign in
Sign in
Select Language
009

At-Tawbah 9:110 لا يزال بنيانهم الذي بنوا ريبة في قلوبهم الا ان تقطع قلوبهم والله عليم حكيم ١١٠

9:110
لَا
يَزَالُ
بُنۡيَٰنُهُمُ
ٱلَّذِي
بَنَوۡاْ
رِيبَةٗ
فِي
قُلُوبِهِمۡ
إِلَّآ
أَن
تَقَطَّعَ
قُلُوبُهُمۡۗ
وَٱللَّهُ
عَلِيمٌ
حَكِيمٌ
١١٠
ಅವರು ನಿರ್ಮಿಸಿದ ಅವರ ಕಟ್ಟಡವು ಅವರ ಹೃದಯಗಳಲ್ಲಿ ಸಂಶಯ ಪಿಶಾಚಿಯಂತೆ ಅವರನ್ನು ಸತತವಾಗಿ ಚುಚ್ಚುತ್ತಲೇ ಇರುವುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
Continue Reading

Read Tafsir

Ibn Kathir (Abridged)

The Difference between Masjid At-Taqwa and Masjid Ad-Dirar

Allah the Exalted says that the Masjid that has been built on the basis of Taqwa of Allah and His pleasure is not the same as a Masjid that was been built based on causing harm, disbelief and causing division among the believers, and as an ou

…

The Difference between Masjid At-Taqwa and Masjid Ad-Dirar

Allah the Exalted says that the Masjid that has been built on the basis of Taqwa of Allah an

…
More Tafsirs

Read in Context

Chapter 9, Page 204, Juz 11

100. ಮುಹಾಜಿರ್ ಮತ್ತು ಅನ್ಸಾರ್‌ಗಳಲ್ಲಿ ಮೊತ್ತಮೊದಲು ಸತ್ಯವಿಶ್ವಾಸ ಸ್ವೀಕರಿಸಿ ಮುಂಚೂಣಿಯಲ್ಲಿರುವವರ ಬಗ್ಗೆ ಮತ್ತು ಒಳಿತಿನ ಮೂಲಕ ಅವರನ್ನು ಹಿಂಬಾಲಿಸಿದವರ ಬಗ್ಗೆ ಅಲ್ಲಾಹು ಸಂಪ್ರೀತನಾಗಿದ್ದಾನೆ. ಅವನ ಬಗ್ಗೆ ಅವರೂ ಸಂಪ್ರೀತರಾಗಿದ್ದಾರೆ. ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಅವನು ಅವರಿಗಾಗಿ ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಸದಾಕಾಲ ಶಾಶ್ವತವಾಗಿ ವಾಸಿಸುವರು. ಅದೇ ಅತಿದೊಡ್ಡ ವಿಜಯ. 101. ನಿಮ್ಮ ಸುತ್ತಮುತ್ತಲಲ್ಲಿರುವ ಅಲೆಮಾರಿ ಅರಬ್ಬಿಗಳಲ್ಲಿ ಕಪಟವಿಶ್ವಾಸಿಗಳಿದ್ದಾರೆ. ಮದೀನಾ ನಿವಾಸಿಗಳಲ್ಲೂ ಇದ್ದಾರೆ. ಅವರು ಕಪಟತೆಯಲ್ಲಿ ಮಿತಿಮೀರಿದ್ದಾರೆ. ನಿಮಗೆ ಅವರ ಬಗ್ಗೆ ತಿಳಿದಿಲ್ಲ. ಆದರೆ ನಮಗೆ ಅವರ ಬಗ್ಗೆ ತಿಳಿದಿದೆ. ನಾವು ಸದ್ಯವೇ ಅವರನ್ನು ಎರಡು ಬಾರಿ ಶಿಕ್ಷಿಸುವೆವು. ನಂತರ ಅವರನ್ನು ಘೋರ ಶಿಕ್ಷೆಗೆ ತಳ್ಳಲಾಗುವುದು. 102. ತಮ್ಮ ತಪ್ಪುಗಳನ್ನು ಒಪ್ಪಿಕೊಂಡ ಬೇರೆ ಕೆಲವರಿದ್ದಾರೆ. ಅವರು ಒಳ್ಳೆಯ ಮತ್ತು ಕೆಟ್ಟ ಕರ್ಮಗಳನ್ನು ಮಿಶ್ರಗೊಳಿಸಿದ್ದಾರೆ. ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲೂಬಹುದು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. 103. ನೀವು ಅವರ ಸಂಪತ್ತುಗಳಿಂದ ದಾನವನ್ನು ಪಡೆಯಿರಿ. ಅದರ ಮೂಲಕ ನೀವು ಅವರನ್ನು ಶುದ್ಧೀಕರಿಸುತ್ತೀರಿ. ಅವರಿಗೋಸ್ಕರ ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ನಿಮ್ಮ ಪ್ರಾರ್ಥನೆಯು ಅವರ ಪಾಲಿಗೆ ಸಮಾಧಾನವಾಗಿದೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ. 104. ನಿಶ್ಚಯವಾಗಿಯೂ ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರಿಂದ ದಾನಧರ್ಮಗಳನ್ನು ತೆಗೆದುಕೊಳ್ಳುತ್ತಾನೆ; ಅವನು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆೆಂದು ಅವರಿಗೆ ತಿಳಿದಿಲ್ಲವೇ? 105. ಹೇಳಿರಿ: “ನೀವು ಕರ್ಮವೆಸಗಿರಿ. ಅಲ್ಲಾಹು, ಅವನ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ನಿಮ್ಮ ಕರ್ಮಗಳನ್ನು ನೋಡುವರು. ನಂತರ ನಿಮ್ಮನ್ನು ದೃಶ್ಯ-ಅದೃಶ್ಯಗಳನ್ನು ತಿಳಿದವನ (ಅಲ್ಲಾಹನ) ಬಳಿಗೆ ಮರಳಿಸಲಾಗುವುದು. ಆಗ ನೀವೇನು ಮಾಡುತ್ತಿದ್ದಿರಿ ಎಂದು ಅವನು ನಿಮಗೆ ತಿಳಿಸಿಕೊಡುವನು.” 106. ಅಲ್ಲಾಹನ ಆಜ್ಞೆ ಬರುವ ತನಕ ತೀರ್ಪನ್ನು ಕಾದಿರಿಸಲಾದ ಕೆಲವರಿದ್ದಾರೆ. ಅಲ್ಲಾಹು ಅವರನ್ನು ಶಿಕ್ಷಿಸಬಹುದು ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ. 107. ಹಾನಿ ಮಾಡಲು, ಅಲ್ಲಾಹನನ್ನು ನಿಷೇಧಿಸಲು, ಸತ್ಯವಿಶ್ವಾಸಿಗಳ ನಡುವೆ ಒಡಕು ಮೂಡಿಸಲು ಮತ್ತು ಈಗಾಗಲೇ ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಯುದ್ಧ ಮಾಡಿದವರಿಗೆ ಹೊಂಚುದಾಣವನ್ನು ನಿರ್ಮಿಸಿಕೊಡಲು ಒಂದು ಮಸೀದಿಯನ್ನು ನಿರ್ಮಿಸಿದವರು ಯಾರೋ—ಅವರು, “ನಾವು ಒಳಿತನ್ನು ಮಾತ್ರ ಉದ್ದೇಶಿಸುತ್ತೇವೆ” ಎಂದು ಆಣೆ ಮಾಡಿ ಹೇಳುತ್ತಾರೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂಬುದಕ್ಕೆ ಅಲ್ಲಾಹು ಸಾಕ್ಷಿಯಾಗಿದ್ದಾನೆ. 108. ನೀವು ಯಾವತ್ತೂ ಅಲ್ಲಿ (ನಮಾಝ್ ಮಾಡಲು) ನಿಲ್ಲಬೇಡಿ. ನಿಮಗೆ ನಿಲ್ಲಲು (ನಮಾಝ್ ಮಾಡಲು) ಹೆಚ್ಚು ಅರ್ಹವಾಗಿರುವುದು ಮೊದಲ ದಿನದಿಂದಲೇ ದೇವಭಯದ ಆಧಾರದಲ್ಲಿ ನಿರ್ಮಿಸಲಾದ ಮಸೀದಿಯಾಗಿದೆ. ಅಲ್ಲಿ (ಆ ಮಸೀದಿಯಲ್ಲಿ) ಶುದ್ಧಿಯಾಗಲು ಇಷ್ಟಪಡುವ ಜನರಿದ್ದಾರೆ. ಅಲ್ಲಾಹು ಶುದ್ಧಿಯಾಗಿರುವವರನ್ನು ಇಷ್ಟಪಡುತ್ತಾನೆ. 109. ಅಲ್ಲಾಹನ ಭಯ ಮತ್ತು ಸಂಪ್ರೀತಿಯ ತಳಹದಿಯ ಮೇಲೆ ತನ್ನ ಕಟ್ಟಡವನ್ನು ನಿರ್ಮಿಸಿದವನು ಉತ್ತಮನೋ ಅಥವಾ ಕುಸಿಯುವ ಹಂತದಲ್ಲಿರುವ ಪ್ರಪಾತದ ಅಂಚಿನಲ್ಲಿ ತನ್ನ ಕಟ್ಟಡವನ್ನು ನಿರ್ಮಿಸಿ ಅದರೊಂದಿಗೆ ನರಕಾಗ್ನಿಗೆ ಕುಸಿದು ಬಿದ್ದವನೋ? ಅಕ್ರಮಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. 110. ಅವರು ನಿರ್ಮಿಸಿದ ಅವರ ಕಟ್ಟಡವು ಅವರ ಹೃದಯಗಳಲ್ಲಿ ಸಂಶಯ ಪಿಶಾಚಿಯಂತೆ ಅವರನ್ನು ಸತತವಾಗಿ ಚುಚ್ಚುತ್ತಲೇ ಇರುವುದು. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.

- Kannada Translation - Hamza Butur

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute