Sign in
Sign in
Sign in
Select Language
041

Fussilat 41:36 واما ينزغنك من الشيطان نزغ فاستعذ بالله انه هو السميع العليم ٣٦

41:36
وَإِمَّا
يَنزَغَنَّكَ
مِنَ
ٱلشَّيۡطَٰنِ
نَزۡغٞ
فَٱسۡتَعِذۡ
بِٱللَّهِۖ
إِنَّهُۥ
هُوَ
ٱلسَّمِيعُ
ٱلۡعَلِيمُ
٣٦
ನಿಮಗೆ ಶೈತಾನನ ಕಡೆಯಿಂದ ಏನಾದರೂ ದುಷ್ಪ್ರೇರಣೆ ಉಂಟಾದರೆ ಅಲ್ಲಾಹನೊಡನೆ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Continue Reading

Read Tafsir

Ibn Kathir (Abridged)

The Virtue of calling Others to Allah

وَمَنْ أَحْسَنُ قَوْلاً مِّمَّن دَعَآ إِلَى اللَّهِ

(And who is better in speech than he who invites to Allah,) means, he calls the servants of Allah to Him.

وَعَمِلَ صَـلِحاً وَقَالَ إِنَّنِى مِنَ الْمُسْلِمِينَ

(and does righteous deeds, and says: "I am one of the

…

The Virtue of calling Others to Allah

وَمَنْ أَحْسَنُ قَوْلاً مِّمَّن دَعَآ إِلَى اللَّهِ

(And who is better in speech than he who invites to Allah,) me

…
More Tafsirs

Read in Context

Chapter 41, Page 480, Juz 24

33. ಅಲ್ಲಾಹನ ಕಡೆಗೆ ಕರೆಯುವ, ಸತ್ಕರ್ಮವೆಸಗುವ ಮತ್ತು ನಿಶ್ಚಯವಾಗಿಯೂ ನಾನು ಮುಸ್ಲಿಮರಲ್ಲಿ ಸೇರಿದವನೆಂದು ಹೇಳಿದವನಿಗಿಂತ ಉತ್ತಮ ಮಾತನ್ನು ಹೇಳಿದವನು ಯಾರು? 34. ಒಳಿತು ಮತ್ತು ಕೆಡುಕು ಸಮಾನವಾಗುವುದಿಲ್ಲ. ಕೆಡುಕನ್ನು ಒಳಿತಿನ ಮೂಲಕ ತಡೆಯಿರಿ. ಆಗ ಯಾರೊಡನೆ ನಿಮಗೆ ಶತ್ರುತ್ವವಿದೆಯೋ ಅವನು ನಿಮ್ಮ ಆಪ್ತ ಮಿತ್ರನಂತೆ ಮಾರ್ಪಡುವನು. 35. ತಾಳ್ಮೆಯುಳ್ಳವರಿಗೆ ಮಾತ್ರ ಇದನ್ನು ನೀಡಲಾಗಿದೆ. ಮಹಾ ಭಾಗ್ಯವಂತರಿಗೆ ಮಾತ್ರ ಇದನ್ನು ನೀಡಲಾಗಿದೆ. 36. ನಿಮಗೆ ಶೈತಾನನ ಕಡೆಯಿಂದ ಏನಾದರೂ ದುಷ್ಪ್ರೇರಣೆ ಉಂಟಾದರೆ ಅಲ್ಲಾಹನೊಡನೆ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ. 37. ರಾತ್ರಿ, ಹಗಲು, ಸೂರ್ಯ ಮತ್ತು ಚಂದ್ರ ಅಲ್ಲಾಹನ ದೃಷ್ಟಾಂತಗಳಲ್ಲಿ ಸೇರಿದ್ದಾಗಿವೆ. ಸೂರ್ಯನಿಗೋ, ಚಂದ್ರನಿಗೋ ಸಾಷ್ಟಾಂಗ ಮಾಡಬೇಡಿ. ಬದಲಿಗೆ, ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಸಾಷ್ಟಾಂಗ ಮಾಡಿರಿ. ನೀವು ಅವನನ್ನು ಆರಾಧಿಸುವವರಾಗಿದ್ದರೆ. 38. ಅದರ ಬಳಿಕವೂ ಅವರು ಅಹಂಕಾರ ತೋರುವುದಾದರೆ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಯಿರುವವರು (ದೇವದೂತರು‍ಗಳು) ರಾತ್ರಿ ಮತ್ತು ಹಗಲು ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ. ಅವರು (ಎಂದಿಗೂ) ದಣಿಯುವುದಿಲ್ಲ. 39. ನೀವು ಭೂಮಿಯನ್ನು ಒಣಗಿ ಬರಡಾಗಿ ಕಾಣುವುದು ಅವರ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ನಾವು ಅದರ ಮೇಲೆ ನೀರನ್ನು ಸುರಿಸಿದರೆ ಅದಕ್ಕೆ ಕಂಪನವುಂಟಾಗಿ ಬೆಳೆಯತೊಡಗುತ್ತದೆ. ಅದಕ್ಕೆ ಜೀವ ನೀಡಿದವನು ಖಂಡಿತವಾಗಿಯೂ ಮರಣಹೊಂದಿದವರಿಗೆ ಜೀವ ನೀಡುತ್ತಾನೆ. ನಿಶ್ಚಯವಾಗಿಯೂ ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. 40. ನಿಶ್ಚಯವಾಗಿಯೂ ನಮ್ಮ ದೃಷ್ಟಾಂತಗಳಲ್ಲಿ ವಿಚಲತೆಯನ್ನು ಉಂಟುಮಾಡುವವರು ಯಾರೋ ಅವರು ನಮ್ಮಿಂದ (ಸ್ವಲ್ಪವೂ) ಮರೆಯಾಗಿಲ್ಲ. ಹಾಗಾದರೆ ನರಕಕ್ಕೆ ಹಾಕಲಾಗುವವನು ಶ್ರೇಷ್ಠನೋ? ಅಥವಾ ಪುನರುತ್ಥಾನ ದಿನದಂದು ನಿರ್ಭಯವಾಗಿ ಬರುವವನೋ? ನೀವು ಬಯಸುವುದನ್ನು ಮಾಡಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅವನು ವೀಕ್ಷಿಸುತ್ತಿದ್ದಾನೆ. 41. ನಿಶ್ಚಯವಾಗಿಯೂ ಈ ಉಪದೇಶವು ಅವರ ಬಳಿಗೆ ಬಂದಾಗ ಅದನ್ನು ನಿಷೇಧಿಸಿದವರು (ನಷ್ಟ ಹೊಂದಿದರು). ನಿಶ್ಚಯವಾಗಿಯೂ ಇದೊಂದು ಪ್ರಬಲ ಗ್ರಂಥವಾಗಿದೆ. 42. ಅದರ ಮುಂದಿನಿಂದ ಅಥವಾ ಹಿಂದಿನಿಂದ ಮಿಥ್ಯವು ಅದರಲ್ಲಿ ಸೇರಿಕೊಳ್ಳುವುದಿಲ್ಲ. ಅದು ವಿವೇಕಪೂರ್ಣನು ಮತ್ತು ಸ್ತುತ್ಯರ್ಹನಾದ ಅಲ್ಲಾಹನಿಂದ ಅವತೀರ್ಣವಾಗಿದೆ. 43. ನಿಮಗಿಂತ ಮೊದಲಿನ ಸಂದೇಶವಾಹಕರುಗಳೊಡನೆ ಹೇಳಲಾಗಿರುವುದನ್ನೇ ನಿಮ್ಮೊಡನೆಯೂ ಹೇಳಲಾಗಿದೆ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ಯಾತನಾಮಯ ಶಿಕ್ಷೆ ನೀಡುವವನಾಗಿದ್ದಾನೆ. 44. ನಾವು ಇದನ್ನು ಅರಬ್ಬೇತರ ಭಾಷೆಯ ಕುರ್‌ಆನ್ ಆಗಿ ಮಾಡಿರುತ್ತಿದ್ದರೆ ಅವರು ಕೇಳುತ್ತಿದ್ದರು: “ಇದರ ವಚನಗಳನ್ನೇಕೆ ವಿವರಿಸಲಾಗಿಲ್ಲ? ಅರಬೇತರ (ಗ್ರಂಥ) ಮತ್ತು ಅರಬಿ(ಪ್ರವಾದಿ)ಯೇ?” ಹೇಳಿರಿ: “ಇದು (ಕುರ್‌ಆನ್) ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಮತ್ತು ಉಪಶಮನವಾಗಿದೆ. ಅದರಲ್ಲಿ ವಿಶ್ವಾಸವಿಡದವರು ಯಾರೋ ಅವರ ಕಿವಿಗಳಲ್ಲಿ ಕಿವುಡುತನವಿದೆ. ಅದು (ಕುರ್‌ಆನ್) ಅವರಿಗೆ ಕುರುಡುತನವಾಗಿದೆ. ಈ ಜನರು ವಿದೂರ ಸ್ಥಳದಿಂದ ಕೂಗಿ ಕರೆಯಲಾಗುವವರಾಗಿದ್ದಾರೆ.”

- Kannada Translation - Hamza Butur

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute