Sign in
Sign in
Sign in
Select Language
040

Ghafir 40:15 رفيع الدرجات ذو العرش يلقي الروح من امره على من يشاء من عباده لينذر يوم التلاق ١٥

40:15
رَفِيعُ
ٱلدَّرَجَٰتِ
ذُو
ٱلۡعَرۡشِ
يُلۡقِي
ٱلرُّوحَ
مِنۡ
أَمۡرِهِۦ
عَلَىٰ
مَن
يَشَآءُ
مِنۡ
عِبَادِهِۦ
لِيُنذِرَ
يَوۡمَ
ٱلتَّلَاقِ
١٥
ಅವನು ಉನ್ನತ ಪದವಿಗಳನ್ನು ಹೊಂದಿರುವವನು ಮತ್ತು ಸಿಂಹಾಸನದ ಒಡೆಯನಾಗಿದ್ದಾನೆ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರಿಗೆ ದೇವವಾಣಿಯನ್ನು ನೀಡುತ್ತಾನೆ. ಭೇಟಿಯ ದಿನದ ಬಗ್ಗೆ ಅವರು ಜನರಿಗೆ ಎಚ್ಚರಿಕೆ ನೀಡಲೆಂದು.
Continue Reading

Read Tafsir

Ibn Kathir (Abridged)

Allah sends the Revelation to warn His Servants of the Day of Mutual Meeting

Allah tells us of His might and pride, and that His Mighty Throne is raised above all of His creation like a roof. This is like the Ayah:

مِّنَ اللَّهِ ذِي الْمَعَارِجِ - تَعْرُجُ الْمَلَـئِكَةُ وَالرُّوحُ إِلَيْهِ فِى يَوْمٍ

…

Allah sends the Revelation to warn His Servants of the Day of Mutual Meeting

Allah tells us of His might and pride, and that His Mighty Throne is raise

…
More Tafsirs

Read in Context

Chapter 40, Page 468, Juz 24

10. ನಿಶ್ಚಯವಾಗಿಯೂ ಸತ್ಯನಿಷೇಧಿಗಳನ್ನು ಕರೆದು ಹೀಗೆ ಹೇಳಲಾಗುವುದು: “ನಿಮಗೆ ನಿಮ್ಮ ಮೇಲಿರುವ ಕೋಪಕ್ಕಿಂತಲೂ ಹೆಚ್ಚು ಕೋಪವು ನಿಮ್ಮನ್ನು ಸತ್ಯವಿಶ್ವಾಸದ ಕಡೆಗೆ ಕರೆಯಲಾಗುತ್ತಿದ್ದೂ ಸಹ ನೀವು ಸತ್ಯವನ್ನು ನಿಷೇಧಿಸುತ್ತಿದ್ದ ಸಂದರ್ಭ ಅಲ್ಲಾಹನಿಗೆ ನಿಮ್ಮ ಮೇಲಿತ್ತು.” 11. ಅವರು ಹೇಳುವರು: “ನಮ್ಮ ಪರಿಪಾಲಕನೇ! ನೀನು ನಮ್ಮನ್ನು ಎರಡು ಬಾರಿ ಸಾವನ್ನಪ್ಪುವಂತೆ ಮಾಡಿದೆ ಮತ್ತು ನಮಗೆ ಎರಡು ಬಾರಿ ಜೀವವನ್ನು ನೀಡಿದೆ. ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದೇವೆ. ಆದ್ದರಿಂದ ಹೊರಹೋಗಲು ಯಾವುದಾದರೂ ದಾರಿಯಿದೆಯೇ?” 12. ಅದೇಕೆಂದರೆ, ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸಲಾದರೆ ನೀವು ನಿಷೇಧಿಸುತ್ತಿದ್ದಿರಿ ಮತ್ತು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾದರೆ ನೀವು ವಿಶ್ವಾಸವಿಡುತ್ತಿದ್ದಿರಿ. ಆದರೆ (ಇಂದು) ತೀರ್ಪು ನೀಡುವ ಅಧಿಕಾರವು ಅತ್ಯುನ್ನತನು ಮತ್ತು ಸರ್ವಶ್ರೇಷ್ಠನಾದ ಅಲ್ಲಾಹನಿಗಾಗಿದೆ. 13. ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡುತ್ತಾನೆ ಮತ್ತು ಆಕಾಶದಿಂದ ನಿಮಗೆ ಉಪಜೀವನವನ್ನು ಇಳಿಸಿಕೊಡುತ್ತಾನೆ. (ಅಲ್ಲಾಹನ ಕಡೆಗೆ) ಮರಳುವವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ. 14. ನೀವು ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ. 15. ಅವನು ಉನ್ನತ ಪದವಿಗಳನ್ನು ಹೊಂದಿರುವವನು ಮತ್ತು ಸಿಂಹಾಸನದ ಒಡೆಯನಾಗಿದ್ದಾನೆ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರಿಗೆ ದೇವವಾಣಿಯನ್ನು ನೀಡುತ್ತಾನೆ. ಭೇಟಿಯ ದಿನದ ಬಗ್ಗೆ ಅವರು ಜನರಿಗೆ ಎಚ್ಚರಿಕೆ ನೀಡಲೆಂದು. 16. ಜನರೆಲ್ಲರೂ ಬಯಲಿಗೆ ಬರುವ ದಿನ. ಅವರಿಗೆ ಸಂಬಂಧಿಸಿದ ಯಾವುದೇ ವಿಷಯವು ಅಲ್ಲಾಹನಿಂದ ಮರೆಯಾಗಿರುವುದಿಲ್ಲ. ಇಂದು ಸಾರ್ವಭೌಮತ್ವವು ಯಾರಿಗೆ? ಏಕೈಕನು ಮತ್ತು ಸರ್ವಾಧಿಕಾರಿಯಾದ ಅಲ್ಲಾಹನಿಗೆ. 17. ಇಂದು ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ನೀಡಲಾಗುವುದು. ಇಂದು ಯಾರಿಗೂ ಅನ್ಯಾಯವಾಗುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ. 18. ಅವರಿಗೆ ಬಹಳ ಹತ್ತಿರವಾಗುವ ಆ ದಿನದ (ಪುನರುತ್ಥಾನ ದಿನದ) ಬಗ್ಗೆ ಎಚ್ಚರಿಕೆ ನೀಡಿರಿ. ಹೃದಯಗಳು ಗಂಟಲಿಗೆ ತಲುಪುವ ಮತ್ತು ಅವರೆಲ್ಲರೂ ನಿಶ್ಶಬ್ದರಾಗುವ ಸಂದರ್ಭ. ಅಕ್ರಮಿಗಳಿಗೆ ಯಾವುದೇ ಆಪ್ತಮಿತ್ರರು ಅಥವಾ ಅಂಗೀಕಾರಯೋಗ್ಯ ಶಿಫಾರಸು ಮಾಡುವವರು ಯಾರೂ ಇರಲಾರರು. 19. ಅವನು ಕಣ್ಣುಗಳ ವಂಚನೆಯ ನೋಟಗಳನ್ನು ಮತ್ತು ಹೃದಯಗಳು ಬಚ್ಚಿಡುವುದನ್ನು ತಿಳಿಯುತ್ತಾನೆ. 20. ಅಲ್ಲಾಹು ಸರಿಯಾದ ರೀತಿಯಲ್ಲಿ ತೀರ್ಪು ನೀಡುತ್ತಾನೆ. ಅವರು ಅವನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತಾರೋ ಅವರು ಯಾವುದೇ ವಿಷಯದಲ್ಲೂ ತೀರ್ಪು ನೀಡುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.

- Kannada Translation - Hamza Butur

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute