Sign in
Sign in
Sign in
Select Language
011

Hud 11:25 ولقد ارسلنا نوحا الى قومه اني لكم نذير مبين ٢٥

11:25
وَلَقَدۡ
أَرۡسَلۡنَا
نُوحًا
إِلَىٰ
قَوۡمِهِۦٓ
إِنِّي
لَكُمۡ
نَذِيرٞ
مُّبِينٌ
٢٥
ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. (ಅವರು ಹೇಳಿದರು:) “ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ.
Continue Reading

Read Tafsir

Ibn Kathir (Abridged)

The Story of Nuh and His Conversation with His People

Allah, the Exalted, informs about Prophet Nuh. He was the first Messenger whom Allah sent to the people of the earth who were polytheists involved in worshipping idols. Allah mentions that he (Nuh) said to his people,

إِنَّى لَكُمْ نَذِيرٌ مُّبِين
…

The Story of Nuh and His Conversation with His People

Allah, the Exalted, informs about Prophet Nuh. He was the first Messenger whom Allah sent to the

…
More Tafsirs

Read in Context

Chapter 11, Page 224, Juz 12

25. ನಿಶ್ಚಯವಾಗಿಯೂ ನಾವು ನೂಹರನ್ನು ಅವರ ಜನರ ಬಳಿಗೆ ಕಳುಹಿಸಿದೆವು. (ಅವರು ಹೇಳಿದರು:) “ನಿಶ್ಚಯವಾಗಿಯೂ ನಾನು ನಿಮಗೆ ಸ್ಪಷ್ಟ ಮುನ್ನೆಚ್ಚರಿಕೆ ನೀಡುವವನಾಗಿದ್ದೇನೆ. 26. ನೀವು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬಾರದು. ನಿಶ್ಚಯವಾಗಿಯೂ ಯಾತನಾಮಯ ದಿನದ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನನಗೆ ಭಯವಾಗುತ್ತಿದೆ.” 27. ಆಗ ಅವರ ಜನರಲ್ಲಿದ್ದ ಸತ್ಯನಿಷೇಧಿಗಳ ಮುಖಂಡರು ಹೇಳಿದರು: “ನೀನು ನಮಗೆ ನಮ್ಮಂತಿರುವ ಒಬ್ಬ ಮನುಷ್ಯನಂತೆ ಕಾಣುತ್ತಿರುವೆ. ನಮ್ಮಲ್ಲಿನ ಅತ್ಯಂತ ಕೆಳವರ್ಗದ ಜನರು ಮಾತ್ರ ನಿನ್ನನ್ನು ಹಿಂಬಾಲಿಸಿದ್ದಾರೆಂದು ನಮಗೆ ಕಾಣುತ್ತಿದೆ—ಅದೂ ಕೂಡ ಯಾವುದೇ ವಿವೇಚನೆಯಿಲ್ಲದೆ. ನಿನಗೆ ನಮ್ಮ ಮೇಲೆ ಯಾವುದೇ ಶ್ರೇಷ್ಠತೆಯಿರುವುದು ನಮಗೆ ಕಾಣಿಸುತ್ತಿಲ್ಲ. ಬದಲಿಗೆ, ನೀನೊಬ್ಬ ಸುಳ್ಳುಗಾರನೆಂದೇ ನಾವು ಭಾವಿಸುತ್ತಿದ್ದೇವೆ.” 28. ನೂಹ್ ಹೇಳಿದರು: “ಓ ನನ್ನ ಜನರೇ! ನೀವು ಆಲೋಚಿಸಿ ನೋಡಿದ್ದೀರಾ? ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಸ್ಪಷ್ಟ ಆಧಾರದ ಮೇಲೆ ನಿಂತಿದ್ದೇನೆ ಮತ್ತು ಅವನು ತನ್ನ ದಯೆಯನ್ನು (ಪ್ರವಾದಿತ್ವವನ್ನು) ನನಗೆ ದಯಪಾಲಿಸಿದ್ದಾನೆ. ಆದರೂ ಅದನ್ನು ನೋಡಲು ನಿಮಗೆ ಸಾಧ್ಯವಾಗದಿದ್ದರೆ ನಾವು ಅದನ್ನು ಬಲವಂತವಾಗಿ ನಿಮ್ಮ ಮೇಲೆ ಹೇರಬೇಕೇ? ನೀವು ಅದನ್ನು ಇಷ್ಟಪಡದವರಾಗಿದ್ದೂ ಸಹ. 29. ಓ ನನ್ನ ಜನರೇ! ಇದಕ್ಕೆ ಪ್ರತಿಫಲವಾಗಿ ನಾನು ನಿಮ್ಮಲ್ಲಿ ಹಣವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದ ಹೊಣೆಯಿರುವುದು ಅಲ್ಲಾಹನಿಗೆ ಮಾತ್ರ. ನಾನು ಸತ್ಯವಿಶ್ವಾಸಿಗಳನ್ನು ದೂರ ಮಾಡುವುದಿಲ್ಲ. ನಿಶ್ಚಯವಾಗಿಯೂ ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವರು. ಆದರೆ ನಾನು ನಿಮ್ಮನ್ನು ತಿಳುವಳಿಕೆಯಿಲ್ಲದ ಜನರಂತೆ ಕಾಣುತ್ತಿದ್ದೇನೆ. 30. ಓ ನನ್ನ ಜನರೇ! ನಾನು ಅವರನ್ನು ದೂರ ಮಾಡಿದರೆ ಅಲ್ಲಾಹನ ಶಿಕ್ಷೆಯಿಂದ ನನ್ನನ್ನು ರಕ್ಷಿಸುವವರು ಯಾರು? ನೀವು ಉಪದೇಶವನ್ನು ಸ್ವೀಕರಿಸುವುದಿಲ್ಲವೇ? 31. ಅಲ್ಲಾಹನ ಖಜಾನೆಗಳು ನನ್ನ ಬಳಿಯಿವೆ ಎಂದು ನಾನು ನಿಮಗೆ ಹೇಳುವುದಿಲ್ಲ. ನನಗೆ ಅದೃಶ್ಯ ಜ್ಞಾನವಿಲ್ಲ. ನಾನೊಬ್ಬ ದೇವದೂತನೆಂದು ನಾನು ಹೇಳುವುದಿಲ್ಲ. ನಿಮ್ಮ ಕಣ್ಣುಗಳು ಕೀಳಾಗಿ ಕಾಣುವ ಈ ಜನರಿಗೆ ಅಲ್ಲಾಹು ಒಳ್ಳೆಯದು ಮಾಡಲಾರನೆಂದು ನಾನು ಹೇಳುವುದಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೆಂದು ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ. ನಾನು ಇಂತಹ ಮಾತುಗಳನ್ನು ಹೇಳಿದರೆ ನಿಶ್ಚಯವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿಬಿಡುವೆನು.” 32. ಜನರು ಹೇಳಿದರು: “ಓ ನೂಹ್! ನೀನು ನಮ್ಮೊಂದಿಗೆ ತರ್ಕಿಸಿರುವೆ. ಬಹಳ ಚೆನ್ನಾಗಿ ತರ್ಕಿಸಿರುವೆ. ನೀನು ಸತ್ಯವನ್ನೇ ಹೇಳುವವನಾಗಿದ್ದರೆ ನಮ್ಮನ್ನು ಹೆದರಿಸುವ ಆ ಶಿಕ್ಷೆಯನ್ನು ಈಗಲೇ ತಂದು ತೋರಿಸು.” 33. ನೂಹ್ ಹೇಳಿದರು: “ಅದನ್ನು ಅಲ್ಲಾಹನೇ ತರುತ್ತಾನೆ. ಅವನು ತರಲಿಚ್ಛಿಸಿದರೆ! ನಿಮಗೆ ಅವನನ್ನು ಸೋಲಿಸಲು ಸಾಧ್ಯವಿಲ್ಲ. 34. ಅಲ್ಲಾಹು ನಿಮ್ಮನ್ನು ದಾರಿತಪ್ಪಿಸಲು ಉದ್ದೇಶಿಸಿದರೆ, ನಾನು ನಿಮಗೆ ಉಪದೇಶ ಮಾಡಲು ಬಯಸಿದರೂ ನನ್ನ ಉಪದೇಶವು ನಿಮಗೆ ಉಪಕಾರ ಮಾಡುವುದಿಲ್ಲ. ಅವನೇ ನಿಮ್ಮ ಪರಿಪಾಲಕನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.” 35. “ಇದನ್ನು ಅವರು (ಪ್ರವಾದಿ) ಸ್ವಯಂ ರಚಿಸಿ ತಂದಿದ್ದಾರೆ” ಎಂದು ಅವರು ಹೇಳುತ್ತಿದ್ದಾರೆಯೇ? ಹೇಳಿರಿ: “ನಾನು ಇದನ್ನು ಸ್ವಯಂ ರಚಿಸಿ ತಂದಿದ್ದರೆ ನಾನು ಮಾಡಿದ ಅಪರಾಧವನ್ನು ನಾನೇ ಅನುಭವಿಸಬೇಕಾಗಿದೆ. ಅದರೆ, ನೀವು ಮಾಡುವ ಅಪರಾಧಗಳಿಂದ ನಾನು ಹೊಣೆಮುಕ್ತನಾಗಿದ್ದೇನೆ.”

- Kannada Translation - Hamza Butur

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute