Sign in
Sign in
Sign in
Select Language
010

Yunus 10:91 الان وقد عصيت قبل وكنت من المفسدين ٩١

10:91
ءَآلۡـَٰٔنَ
وَقَدۡ
عَصَيۡتَ
قَبۡلُ
وَكُنتَ
مِنَ
ٱلۡمُفۡسِدِينَ
٩١
(ಅವನೊಡನೆ ಹೇಳಲಾಯಿತು): “ಈಗ ನೀನು ವಿಶ್ವಾಸವಿಡುವುದೇ? ಇದಕ್ಕೆ ಮೊದಲು ನೀನು ಆಜ್ಞೋಲ್ಲಂಘನೆ ಮಾಡಿದ್ದೆ ಮತ್ತು ಕಿಡಿಗೇಡಿಗಳಲ್ಲಿ ಸೇರಿದ್ದೆ.1
Continue Reading

Read Tafsir

Ibn Kathir (Abridged)

The Children of Israel were saved and Fir`awn's People drowned

Allah tells us how He caused Fir`awn and his soldiers to drown. The Children of Israel left Egypt in the company of Musa. It was said that there were six hundred thousand soldiers, plus offspring. They borrowed a lot of ornaments from the

…

The Children of Israel were saved and Fir`awn's People drowned

Allah tells us how He caused Fir`awn and his soldiers to drown. The Children of Israel l

…
More Tafsirs

Read in Context

Chapter 10, Page 219, Juz 11

83. ಮೂಸಾರ ಜನರಲ್ಲಿ ಸೇರಿದ ಕೆಲವು ಯುವಕರ ಹೊರತು ಬೇರೆ ಯಾರೂ ಅವರಲ್ಲಿ ವಿಶ್ವಾಸವಿಡಲಿಲ್ಲ. ಅದೂ ಸಹ ಫರೋಹ ಮತ್ತು ಅವರ ಮುಖಂಡರು ಅವರನ್ನು ಹಿಂಸೆಗೆ ಗುರಿಯಾಗಿಸುವರೋ ಎಂಬ ಭಯದಿಂದ. ನಿಶ್ಚಯವಾಗಿಯೂ ಫರೋಹ‍ ಭೂಮಿಯಲ್ಲಿ ದರ್ಪ ತೋರುತ್ತಿದ್ದನು. ನಿಶ್ಚಯವಾಗಿಯೂ ಅವನು ಹದ್ದು ಮೀರಿದವನಾಗಿದ್ದನು. 84. ಮೂಸಾ ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದರೆ ಅವನಲ್ಲಿ ಭರವಸೆಯಿಡಿ. ನೀವು ಮುಸಲ್ಮಾನರಾಗಿದ್ದರೆ.” 85. ಆಗ ಅವರು ಹೇಳಿದರು: “ನಾವು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪರಿಪಾಲಕನೇ! ಈ ಅಕ್ರಮಿಗಳಾದ ಜನರಿಗೆ ನಮ್ಮನ್ನು ಪರೀಕ್ಷೆಯ ವಸ್ತುವಾಗಿ ಮಾಡಬೇಡ. 86. ನಿನ್ನ ದಯೆಯಿಂದ ನಮ್ಮನ್ನು ಸತ್ಯನಿಷೇಧಿಗಳಾದ ಜನರಿಂದ ರಕ್ಷಿಸು.” 87. ಮೂಸಾ ಮತ್ತು ಅವರ ಸಹೋದರನಿಗೆ ನಾವು ದೇವವಾಣಿಯನ್ನು ನೀಡಿದೆವು: “ನೀವು ನಿಮ್ಮ ಜನರಿಗೆ ಈಜಿಪ್ಟಿನಲ್ಲಿ ವಾಸ್ತವ್ಯಗಳನ್ನು ಮಾಡಿಕೊಡಿ, ಮತ್ತು ನಿಮ್ಮ ಮನೆಗಳನ್ನು ಆರಾಧನಾಲಯಗಳಾಗಿ ಮಾಡಿ ನಮಾಝನ್ನು ಸಂಸ್ಥಾಪಿಸಿರಿ. ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿ.” 88. ಮೂಸಾ ಹೇಳಿದರು: “ಓ ನಮ್ಮ ಪರಿಪಾಲಕನೇ! ನಿಶ್ಚಯವಾಗಿಯೂ ನೀನು ಫರೋಹ ಮತ್ತು ಅವನ ಜನರ ಮುಖಂಡರಿಗೆ ಇಹಲೋಕದಲ್ಲಿ ವೈಭವ ಮತ್ತು ಐಶ್ವರ್ಯವನ್ನು ನೀಡಿರುವೆ. ಓ ನಮ್ಮ ಪರಿಪಾಲಕನೇ! ಜನರನ್ನು ನಿನ್ನ ಮಾರ್ಗದಿಂದ ತಪ್ಪಿಸುವುದಕ್ಕಾಗಿ (ಅವರು ಅದನ್ನು ಬಳಸುತ್ತಾರೆ). ಓ ನಮ್ಮ ಪರಿಪಾಲಕನೇ! ಅವರ ಐಶ್ವರ್ಯವನ್ನು ನಾಶ ಮಾಡು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸು. ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ವಿಶ್ವಾಸವಿಡದಿರಲಿ.” 89. ಅಲ್ಲಾಹು ಹೇಳಿದನು: “ನಿಮ್ಮಿಬ್ಬರ ಪ್ರಾರ್ಥನೆಗೆ ಉತ್ತರ ನೀಡಲಾಗಿದೆ. ಆದ್ದರಿಂದ ನೀವಿಬ್ಬರೂ ದೃಢವಾಗಿ ನಿಲ್ಲಿರಿ ಮತ್ತು ತಿಳುವಳಿಕೆಯಿಲ್ಲದ ಜನರ ಮಾರ್ಗವನ್ನು ಹಿಂಬಾಲಿಸಬೇಡಿ.” 90. ನಾವು ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿದೆವು. ಆಗ ಫರೋಹ ಮತ್ತು ಅವನ ಸೈನ್ಯವು ದಬ್ಬಾಳಿಕೆ ಮತ್ತು ದ್ವೇಷದೊಂದಿಗೆ ಅವರನ್ನು ಹಿಂಬಾಲಿಸಿದರು. ಎಲ್ಲಿಯವರೆಗೆಂದರೆ, ಅವನು ಮುಳುಗಿ ಸಾಯುವಂತಾದಾಗ ಹೇಳಿದನು: “ಇಸ್ರಾಯೇಲ್ ಮಕ್ಕಳು ನಂಬಿದ ದೇವನ (ಅಲ್ಲಾಹನ) ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲ ಎಂದು ನಾನು ವಿಶ್ವಾಸವಿಟ್ಟಿದ್ದೇನೆ. ನಾನು ಮುಸಲ್ಮಾನರಲ್ಲಿ ಸೇರಿದ್ದೇನೆ.” 91. (ಅವನೊಡನೆ ಹೇಳಲಾಯಿತು): “ಈಗ ನೀನು ವಿಶ್ವಾಸವಿಡುವುದೇ? ಇದಕ್ಕೆ ಮೊದಲು ನೀನು ಆಜ್ಞೋಲ್ಲಂಘನೆ ಮಾಡಿದ್ದೆ ಮತ್ತು ಕಿಡಿಗೇಡಿಗಳಲ್ಲಿ ಸೇರಿದ್ದೆ. 92. ಇಂದು ನಾವು ನಿನ್ನ ದೇಹವನ್ನು ಉಳಿಸುವೆವು. ನಿನ್ನ ನಂತರ ಬರುವವರಿಗೆ ನೀನೊಂದು ನಿದರ್ಶನವಾಗುವುದಕ್ಕಾಗಿ. ನಿಶ್ಚಯವಾಗಿಯೂ ಜನರಲ್ಲಿ ಹೆಚ್ಚಿನವರು ನಮ್ಮ ನಿದರ್ಶನಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದಾರೆ.”

- Kannada Translation - Hamza Butur

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute